<ಗದುಗಿನ ಭಾರತ ಪದಕೋಶ
ಶ,ಷ
 1.		ಶಂಬರರು, ಶಂಬರಾಸುರನಂಥವರು, ಸಭಾ ಪರ್ವ,12,87
 2.		ಶಕ್ರ, ದೇವೆಂದ್ರ, ಸಭಾ ಪರ್ವ,2,129
 3.		ಶಕ್ರನಂದನ, ಇಂದ್ರನ ಮಗ, ಆದಿ ಪರ್ವ,19,24
 4.		ಶಠಾಗಮಿಕ, ವಂಚನೆಯಲ್ಲಿ ಪಾರಂಗತನಾದವನು., ಆದಿ ಪರ್ವ,14,29
 5.		ಶತಖಂಡ, ನೂರು ತುಂಡು, ವಿರಾಟ ಪರ್ವ,4,49
 6.		ಶತಮಖ, ನೂರು ಯಜ್ಞಗಳನ್ನು ಮಾಡಿದವನು, ಕರ್ಣ ಪರ್ವ,7,9
 7.		ಶತಮನ್ಯು, ನೂರು ಯಾಗಗಳನ್ನು ಮಾಡಿದವನು, ಅರಣ್ಯ ಪರ್ವ,7,83
 8.		ಶತಮನ್ಯು, ದೇವೇಂದ್ರ, ಭೀಷ್ಮ ಪರ್ವ,4,66
 9.		ಶತಸಾವಿರ, ಲಕ್ಷ, ಆದಿ ಪರ್ವ,13,9
 10.		ಶಫರಿ, ಮೀನು, ಆದಿ ಪರ್ವ,13,18
 11.		ಶಮಿ, ಶಮೀವೃಕ್ಷ, ವಿರಾಟ ಪರ್ವ,6,31
 12.		ಶರ, ಬಿಲ್ಲು ಬಾಣ, ಭೀಷ್ಮ ಪರ್ವ,6,37
 13.		ಶರಜಾಲ, ಬಾಣಗಳಗುಂಪು, ಗದಾ ಪರ್ವ,2,7
 14.		ಶರತಿಮಿರ, ಬಾಣ ಎಂಬ ಅಂಧಕಾರ, ವಿರಾಟ ಪರ್ವ,8,36
 15.		ಶರಲವಣೆ, ಬಾಣಗಳ ಚಮತ್ಕಾರ, ಶಲ್ಯ ಪರ್ವ,2,21
 16.		ಶರವಹ್ನಿ, ಬಾಣವೆಂಬ ಬೆಂಕಿ, ಗದಾ ಪರ್ವ,11,48
 17.		ಶರವಳೆ, ಬಾಣಗಳ ಮಳೆ, ಶಲ್ಯ ಪರ್ವ,2,34
 18.		ಶರವಿಸರ, ಬಾಣಗಳ ಸಮೂಹ., ಭೀಷ್ಮ ಪರ್ವ,9,39
 19.		ಶರಶಯನ, ಬಾಣಗಳ ಸಜ್ಜೆ, ಭೀಷ್ಮ ಪರ್ವ,10,0
 20.		ಶರಸಂಧಾನ, ಬಾಣ ಬಿಡುವ ವೈಖರಿ (ಹೂಡುವ, ವಿರಾಟ ಪರ್ವ,7,44
 21.		ಶರಸನ್ಯಾಸ, ಶಸ್ತ್ರಾಸ್ತ್ರ ಹಿಡಿಯದಿರುವ ವ್ರತ, ದ್ರೋಣ ಪರ್ವ,5,42
 22.		ಶರಸ್ತಂಭ, ಬಾಣಗಳ ಸಮೂಹ, ಆದಿ ಪರ್ವ,6,19
 23.		ಶರಹತಿ, ಬಾಣಸಮೂಹ, ಭೀಷ್ಮ ಪರ್ವ,6,15
 24.		ಶರಾನುಗತ ಶರಜಾಲ, ಒಂದು ಬಾಣದ ಹಿಂದೆ ಮೊತ್ತೊಂದರಂತೆ ಬರುವ ಬಾಣಗಳ ಜಾಲ, ಗದಾ ಪರ್ವ,1,48
 25.		ಶರಾವಳಿ, ಬಾಣ ಸಮೂಹ, ಭೀಷ್ಮ ಪರ್ವ,8,56
 26.		ಶರಾವಳಿಯ ಕೊನೆÉ, ಬಾಣಗಳ ಆಕ್ರಮಣ, ಕರ್ಣ ಪರ್ವ,20,32
 27.		ಶರಾಸನ, ಬಾಣಕ್ಕೆ ಆಸನವಾದುದು, ಶಲ್ಯ ಪರ್ವ,3,28
 28.		ಶರಾಳಿ, ಬಾಣ ಸಮೂಹ, ದ್ರೋಣ ಪರ್ವ,2,43
 29.		ಶರೌಘ, ಬಾಣಗಳ ಗುಂಪು, ಗದಾ ಪರ್ವ,2,29
 30.		ಶರೌಘದ, ಬಾಣಗಳ, ವಿರಾಟ ಪರ್ವ,6,35
 31.		ಶರೌಘಾನಲ, ಬಾಣ ಸಮೂಹ ಎಂಬ ಬೆಂಕಿ, ವಿರಾಟ ಪರ್ವ,6,35
 32.		ಶಲ, ಮುಳ್ಳುಹಂದಿ, ಆದಿ ಪರ್ವ,20,51
 33.		ಶಶಿಕಾಂತ, ಚಂದ್ರಶಿಲೆ, ಉದ್ಯೋಗ ಪರ್ವ,9,45
 34.		ಶಶಿಕಾಂತ, ಚಂದ್ರಕಾಂತ, ಆದಿ ಪರ್ವ,20,49
 35.		ಶಶಿಕಿರಣ ಪೀಯೂಷ, ಚಂದ್ರಕಿರಣವೆಂಬ ಅಮೃತ, ದ್ರೋಣ ಪರ್ವ,18,69
 36.		ಶಶಿಕುಲ, ಚಂದ್ರವಂಶ (ಪಾಂಡವ, ಗದಾ ಪರ್ವ,10,24
 37.		ಶಶಿಕುಲ ಮತ್ತವಾರಣ, ಶಶಿಕುಲ ಪಾಂಡವರ ಚಂದ್ರವಂಶದ ಮತ್ತವಾರಣ, ವಿರಾಟ ಪರ್ವ,9,32
 38.		ಶಶಿಮೌಳಿ, ಚಂದ್ರನನ್ನು ಶಿರದಲ್ಲಿ ಧರಿಸಿರುವವನು, ಗದಾ ಪರ್ವ,9,23
 39.		ಶಶಿರುಚಿ, ಬೆಳದಿಂಗಳು, ಗದಾ ಪರ್ವ,3,20
 40.		ಶಶಿವದನೆ, ಚಂದ, ವಿರಾಟ ಪರ್ವ,3,75
 41.		ಶಸ್ತ್ರಚ್ಯುತಿ, ಆಯುಧವನ್ನು ಕೈಬಿಟ್ಟು, ಗದಾ ಪರ್ವ,11,24
 42.		ಶಸ್ತ್ರಜ್ವಾಲೆ, ಆಯುಧಗಳ ಬೆಳಕು, ಕರ್ಣ ಪರ್ವ,8,7
 43.		ಶಸ್ತ್ರಾವಳಿ, ಶಸ್ತ್ರ ಸಮೂಹ, ವಿರಾಟ ಪರ್ವ,8,36
 44.		ಶಸ್ತ್ರೌಘದಲಿ, ಆಯುಧಗಳ ರಾಶಿಯಿಂದ, ಸಭಾ ಪರ್ವ,1,63
 45.		ಶಾಕಾವಳಿ, ತರಕಾರಿಗಳ ಸಮೂಹ, ವಿರಾಟ ಪರ್ವ,3,36
 46.		ಶಾಕಿನಿ, ಶಾಕಿನಿ ಡಾಕಿನಿ ಇವರು ಸ್ತ್ರೀ ಪಿಶಾಚಗಳು ಎಂಬ ಕವಿ ಸಮಯ. ಶಾಕಿನಿ ದುರ್ಗೆಯ ಪರಿಚಾರಕಿಯಲ್ಲಿ ಒಬ್ಬಳು ಕ್ಷುದ್ರದೇವತೆ. ಶಾಕಿನಿ ಡಾಕಿನಿಯರು ನರಭಕ್ಷಕಿಯರು, ವಿರಾಟ ಪರ್ವ,3,72
 47.		ಶಾಕಿನಿ, ರಣಪಿಶಾಚಿ, ಗದಾ ಪರ್ವ,3,10
 48.		ಶಾಕಿನಿ, ಒಂದು ಕ್ಷುದ್ರದೇವತೆ, ಉದ್ಯೋಗ ಪರ್ವ,6,30
 49.		ಶಾಕಿನಿ, ಕ್ಷುದ್ರ ರಾಕ್ಷಸಿ, ವಿರಾಟ ಪರ್ವ,9,35
 50.		ಶಾಕಿನಿಯರು, ರಕ್ತಪಾನ ಮಾಡುವ ಕ್ಷುದ್ರ ದೇವತೆಯರು, ಭೀಷ್ಮ ಪರ್ವ,8,46
 51.		ಶಾಕಿನೀ ನಿವಹ, ಪಿಶಾಚ ಪರಿವಾರ, ಭೀಷ್ಮ ಪರ್ವ,4,82
 52.		ಶಾತಕುಂಭಾಸನ, ಸ್ವರ್ಣಪೀಠ, ಆದಿ ಪರ್ವ,7,54
 53.		ಶಾಪಾರುಹ, ಶಾಪಕ್ಕೆ ಅರ್ಹನಾದವ, ಗದಾ ಪರ್ವ,11,64
 54.		ಶಾಬರ, ಬೇಟೆಗಾರ ಉಡುಪು, ಅರಣ್ಯ ಪರ್ವ,5,29
 55.		ಶಾಬರ, ಬೇಟೆಗಾರರ. ಶಬರರ, ಅರಣ್ಯ ಪರ್ವ,15,22
 56.		ಶಾಲಿವನ, ಬತ್ತದ ಗದ್ದೆ, ಕರ್ಣ ಪರ್ವ,1,11
 57.		ಶಾಲೀ, ಭತ್ತ, ಸಭಾ ಪರ್ವ,2,57
 58.		ಶಾಲೆ, ಕಟ್ಟಡ, ಆದಿ ಪರ್ವ,12,6
 59.		ಶಾಸನ, ದಾಖಲೆ, ಆದಿ ಪರ್ವ,19,14
 60.		ಶಾಸ್ತ್ರೌಘ, ಶಾಸ್ತ್ರಸಮೂಹ, ಗದಾ ಪರ್ವ,8,30
 61.		ಶಾಳಿವನ, ಬತ್ತದ ಗದ್ದೆ, ಗದಾ ಪರ್ವ,3,28
 62.		ಶಾಳೀವನ, ಬತ್ತದ ಗದ್ದೆ, ದ್ರೋಣ ಪರ್ವ,18,4
 63.		ಶಿಂಶುಮಾರ, ಒಂದು ನಕ್ಷತ್ರಪುಂಜ, ಅರಣ್ಯ ಪರ್ವ,7,68
 64.		ಶಿಕ್ಷಾ, ಶಿಕ್ಷಣ, ಆದಿ ಪರ್ವ,7,42
 65.		ಶಿಖಂಡಿ, ಮೊದಲು ಸ್ತ್ರೀತ್ವ ಹೊಂದಿ ಆಮೇಲೆ ಪುರುಷತ್ವ ಪಡೆದಿರುವನು. ಹೆಣ್ಗಂಡು, ಭೀಷ್ಮ ಪರ್ವ,9,51
 66.		ಶಿಥಿಲ, ಸಡಿಲಾದ , ಗದಾ ಪರ್ವ,10,2
 67.		ಶಿಥಿಲ, ಕೃಶವಾದ, ಉದ್ಯೋಗ ಪರ್ವ,2,3
 68.		ಶಿರ, ಪರ್ವತದ ಶೃಂಗ, ವಿರಾಟ ಪರ್ವ,2,56
 69.		ಶಿರವ ಒಲೆದ, ತಲೆದೂಗಿದನು , ಭೀಷ್ಮ ಪರ್ವ,6,46
 70.		ಶಿರೋವಕುಂಠನ, ತಲೆಮುಸುಕು., ಶಲ್ಯ ಪರ್ವ,1,14
 71.		ಶಿಲಾಳಿಯಲಿ, ಕೆತ್ತನೆಗೆ ಬೇಕಾದ ಕಲ್ಲಿನ ರಾಶಿಯಿಂದ, ಸಭಾ ಪರ್ವ,1,63
 72.		ಶಿಲೋಚ್ಛಯ, ಕಲ್ಲುಗಳಿಂದ ಕೂಡಿದುದು, ಆದಿ ಪರ್ವ,17,2
 73.		ಶಿಲ್ಪಜನ, ಶಿಲ್ಪದ ಕೆಲಸ ಮಾಡುವವರು, ಗದಾ ಪರ್ವ,11,16
 74.		ಶಿವ (ದಕ್ಷನ ಯಜ್ಞವನ್ನು ಶಿವ ನಾಶಮಾಡಿದ) ಸಮಜೋಳಿ, ಸಮ ಜೋಡಿ, ಗದಾ ಪರ್ವ,9,9
 75.		ಶಿವ. ಬಾಹಿರ, ಬಹಿಷ್ಕøತ, ಆದಿ ಪರ್ವ,16,50
 76.		ಶಿವÀಮಯ, ಮಂಗಳಮಯ., ಗದಾ ಪರ್ವ,1,21
 77.		ಶಿಶುತನ, ಬಾಲ್ಯ, ಭೀಷ್ಮ ಪರ್ವ,7,23
 78.		ಶಿಷ್ಟ, ಸಭ್ಯ, ಉದ್ಯೋಗ ಪರ್ವ,5,14
 79.		ಶಿಷ್ಟರು, ಸಜ್ಜನರು, ಉದ್ಯೋಗ ಪರ್ವ,1,5
 80.		ಶಿಳೀಮುಖ, ಬಾಣ ಈಸು, ಕರ್ಣ ಪರ್ವ,14,18
 81.		ಶೀತಳ, ತಂಪು, ಉದ್ಯೋಗ ಪರ್ವ,6,11
 82.		ಶುಂಡಾಲಘಟೆ, ಆನೆಗಳ ಸಮೂಹ, ಕರ್ಣ ಪರ್ವ,11,16
 83.		ಶುಕ, ಗಿಣಿ, ಆದಿ ಪರ್ವ,20,52
 84.		ಶುಕಚಯ, ಗಿಳಿಯಹಿಂಡು, ಉದ್ಯೋಗ ಪರ್ವ,7,27
 85.		ಶುದ್ಧ, ಬರಿಯ, ಆದಿ ಪರ್ವ,15,13
 86.		ಶುಭಗ್ರಹದೃಷ್ಟಿ, ಶುಭಗ್ರಹ ದೃಷ್ಟಿಯೂ, ಸಭಾ ಪರ್ವ,3,14
 87.		ಶುಭೌಘ, ಶುಭ ಸಮಾಚಾರಗಳ ಸಮೂಹ, ವಿರಾಟ ಪರ್ವ,10,79
 88.		ಶುಶ್ರೂಷೆ, ಉಪಚಾರ, ಆದಿ ಪರ್ವ,19,31
 89.		ಶೂದ್ರತೆಗೆ, ಮೈಲಿಗೆಗೆ, ಭೀಷ್ಮ ಪರ್ವ,4,6
 90.		ಶೂನ್ಯ ಶಿಬಿರ, ಖಾಲಿಯಾಗಿರುವ ಶಿಬಿರ, ಗದಾ ಪರ್ವ,8,46
 91.		ಶೂರ, ಧೀರ, ಆದಿ ಪರ್ವ,15,4
 92.		ಶೂಲ, ತ್ರಿಶೂಲ, ಭೀಷ್ಮ ಪರ್ವ,10,5
 93.		ಶೂಲ ಮರುಮೊನೆಗೊಳ್, ಎದೆಗೆ ನೆಟ್ಟ ಶೂಲವು ಬೆನ್ನಿಂದ ಆಚೆ ಬಂದ ಹಾಗೆ., ವಿರಾಟ ಪರ್ವ,3,54
 94.		ಶೃಂಖಳಿತ, ಕಟ್ಟಿಹಾಕಲ್ಪಟ್ಟ, ಗದಾ ಪರ್ವ,5,8
 95.		ಶೃಂಗ, ಜೀರ್ಕೊಳವೆ, ಆದಿ ಪರ್ವ,12,16
 96.		ಶೃಂಗಾರ, ಭೂಷಣಪ್ರಾಯ, ಭೀಷ್ಮ ಪರ್ವ,3,22
 97.		ಶೃಂಗಿ, ಕೊಂಬಿರುವ ಪ್ರಾಣಿ, ಸಭಾ ಪರ್ವ,1,59
 98.		ಶೇಷ, ಉಳಿದಿರುವುದು., ಶಲ್ಯ ಪರ್ವ,2,8
 99.		ಶೇಷ, ಉಳಿದ, ಆದಿ ಪರ್ವ,8,27
 100.		ಶೇಷ, ಉಚ್ಚಿಷ್ಟ, ಆದಿ ಪರ್ವ,16,45
 101.		ಶೇಷಕ್ರಿಯ, ಸತ್ತವರಿಗೆ ನಡೆಸುವ ಉತ್ತರಕ್ರಿಯೆ, ಸಭಾ ಪರ್ವ,2,128
 102.		ಶೇಷಾನ್ನ, ಉಳಿದ ಅನ್ನ, ಆದಿ ಪರ್ವ,10,32
 103.		ಶೈತ್ಯ ಪೂರ, ತಣ್ಣಗಿನ ವಾತಾವರಣದಲ್ಲಿ, ಗದಾ ಪರ್ವ,3,37
 104.		ಶೈಲಾಗ್ರದಲಿ, ಗಿರಿವ್ರಜ ಬೆಟ್ಟದ ಮೇಲುಭಾಗದಲ್ಲಿ, ಸಭಾ ಪರ್ವ,2,59
 105.		ಶೋಕ ಪನ್ನಗ ಘೋರ ವಿಷ, ಶೋಕವೆಂಬ ಭಯಂಕರವಾದ ಹಾವಿನ ವಿಷ, ಗದಾ ಪರ್ವ,11,9
 106.		ಶೋಕಕ್ರೋಧದುಪಟಳ, ಶೋಕ ಮತ್ತು ಕೋಪದ ತೊಂದರೆ, ಗದಾ ಪರ್ವ,11,45
 107.		ಶೋಕಜಲಧಿ, ದುಃಖದ ಸಮುದ್ರ, ಗದಾ ಪರ್ವ,8,57
 108.		ಶೋಕವಹ್ನಿ, ಶೋಕಾಗ್ನಿ, ಗದಾ ಪರ್ವ,11,18
 109.		ಶೋಕವಹ್ನಿ, ದುಃಖದ ಬೆಂಕಿ, ಗದಾ ಪರ್ವ,12,9
 110.		ಶೋಕಶಿಖಿ, ಶೋಕಾಗ್ನಿ, ಶಲ್ಯ ಪರ್ವ,1,6
 111.		ಶೋಕಾಗ್ನಿ, ಶೋಕವೆಂಬ ಅಗ್ನಿ, ಗದಾ ಪರ್ವ,11,12
 112.		ಶೋಕಾಡÀಂಬರ, ದುಃಖದ ಪ್ರಕಟ, ಗದಾ ಪರ್ವ,4,19
 113.		ಶೋಕಾನಳ, ಶೋಕಾಗ್ನಿ, ಗದಾ ಪರ್ವ,11,31
 114.		ಶೋಕಾರ್ತರವ, ಶೋಕದ ನೋವಿನ ಕೂಗು, ಆದಿ ಪರ್ವ,10,8
 115.		ಶೋಕೋತ್ತರ, ಹೆಚ್ಚಾದ ಶೋಕ, ಗದಾ ಪರ್ವ,12,8
 116.		ಶೋಕೋದಧಿ, ದುಃಖ ಸಾಗರ, ದ್ರೋಣ ಪರ್ವ,7,37
 117.		ಶೋಕೋದ್ರೇಕ, (ಶೋಕ+ಉದ್ರೇಕ) ದುಃಖ ಮತ್ತು ಕೋಪ, ಗದಾ ಪರ್ವ,11,48
 118.		ಶೋಣ ಸಲಿಲ, ಕೆಂಪುನೀರು, ಭೀಷ್ಮ ಪರ್ವ,8,15
 119.		ಶೋಣಿತ, ರಕುತ, ಭೀಷ್ಮ ಪರ್ವ,4,29
 120.		ಶೋಣಿತದ ಸಾಗರದಿ, ರಕ್ತ ಪ್ರವಾಹದಲ್ಲಿ, ಭೀಷ್ಮ ಪರ್ವ,8,38
 121.		ಶೋಣಿತಧಾರೆ, ರಕ್ತದ ಪ್ರವಾಹ, ಗದಾ ಪರ್ವ,7,25
 122.		ಶೋಧಿಸು, ಹುಡುಕು, ಗದಾ ಪರ್ವ,12,0
 123.		ಶೋಭಾ, ಅಲಂಕಾರ, ಆದಿ ಪರ್ವ,3,4
 124.		ಶೋಭಿತ, ಅಲಂಕೃತವಾಗಿದ್ದ, ಆದಿ ಪರ್ವ,13,5
 125.		ಶೌಚ, ಸ್ವಚ್ಛ, ಉದ್ಯೋಗ ಪರ್ವ,4,109
 126.		ಶೌಚಾಚಮನ, ಶುದ್ಧಿಗಾಗಿ ಮಾಡುವ ವೈದಿಕ ಕ್ರಿಯೆ, ಗದಾ ಪರ್ವ,8,54
 127.		ಶೌರಿ, ವಿಷ್ಣು, ಆದಿ ಪರ್ವ,1,5
 128.		ಶೌರ್ಯ, ಶೂರತನ, ಆದಿ ಪರ್ವ,10,5
 129.		ಶೌರ್ಯಪಣ, ಶೌರ್ಯಪ್ರತಿಜ್ಞೆ, ಗದಾ ಪರ್ವ,10,17
 130.		ಶ್ರಮ, ಸಾಧನ, ಆದಿ ಪರ್ವ,7,33
 131.		ಶ್ರಮ, ಶಸ್ತ್ರಾಭ್ಯಾಸ, ಆದಿ ಪರ್ವ,6,24
 132.		ಶ್ರಮ, ಅಭ್ಯಾಸ, ಆದಿ ಪರ್ವ,6,42
 133.		ಶ್ರಮ, ಆಯಾಸ., ಉದ್ಯೋಗ ಪರ್ವ,6,29
 134.		ಶ್ರೀನಿಜ, ಮಂಗಳಕರ ಸತ್ಯ ಸ್ವರೂಪ, ಭೀಷ್ಮ ಪರ್ವ,3,64
 135.		ಶ್ರೀಮೂರ್ತಿ, ಮಂಗಳ ಸ್ವರೂಪ, ಭೀಷ್ಮ ಪರ್ವ,3,63
 136.		ಶ್ರೀಲತಾಂಗಿ, ಶ್ರೀಲಕ್ಷ್ಮಿ, ಉದ್ಯೋಗ ಪರ್ವ,1,1
 137.		ಶ್ರುತಶಾಸ್ತ್ರರು, ಶಾಸ್ತ್ರವನ್ನು ತಿಳಿದವರು., ಗದಾ ಪರ್ವ,5,28
 138.		ಶ್ರುತಿಕೋಟಿ, ಅಪಾರವಾದ ವೇದ ರಾಶಿ. ಮುರಿ, ಕರ್ಣ ಪರ್ವ,7,15
 139.		ಶ್ರುತಿಪತ್ರ, ಕಿವಿಯೋಲೆ, ಕರ್ಣ ಪರ್ವ,21,23
 140.		ಖೇಚರ, ಆಕಾಶಸಂಚಾರಿ, ಗದಾ ಪರ್ವ,5,25
 141.		ಶ್ರೋತ್ರಿಯ, ವೇದವನ್ನರಿತ ಬ್ರಾಹ್ಮಣ, ಆದಿ ಪರ್ವ,15,11
 142.		ಶ್ರೌತ, ವೇದ ಸಮ್ಮತವಾದ, ಸಭಾ ಪರ್ವ,8,15
 143.		ಶ್ವಾನ, ನಾಯಿ, ಉದ್ಯೋಗ ಪರ್ವ,4,74
 144.		ಶ್ವಾಸ, ಉಸಿರಾಟದ ಗಾಳಿ, ಗದಾ ಪರ್ವ,7,8
 145.		ಶ್ವೇತಹಯ, ಅರ್ಜುನನ ಹೆಸರು, ದ್ರೋಣ ಪರ್ವ,10,8
 146.		ಷಟ್‍ತರ್ಕ, ಸಾಂಖ್ಯ , ಭೀಷ್ಮ ಪರ್ವ,3,64, , ,  ವೈಶೇಷಿಕ,  ಮೀಮಾಂಸ,  ವೇದಾಂತವೆಂಬ 6 ಶಾಸ್ತ್ರಗಳ, 
 147.		ಷಡುರಸ, ಸಿಹಿ, ಉದ್ಯೋಗ ಪರ್ವ,8,64, , ,  ಹುಳಿ ,  ಒಗರು ,  ಕಹಿ, 
 148.		ಢವಣಿಸು, ಢವಣಿ ಎಂಬ ಚÀರ್ಮವಾದ್ಯವನ್ನು ಬಾರಿಸು. ಢಾಣೆ, ಕರ್ಣ ಪರ್ವ,7,13
 149.		ಸಂಕರುಷಣ, ಬಲರಾಮ (ಒಂದು ಗರ್ಭದಿಂದ ಮತ್ತೊಂದು ಗರ್ಭಕ್ಕೆ ಸಂಕ್ರಮಿಸಿದ ಕಾರಣ ಸಂಕರ್ಷಣನೆಂದು ಹೆಸರು), ಆದಿ ಪರ್ವ,19,40
ಕುಮಾರವ್ಯಾಸ ಕೋಶ ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.ಸಿರಿಗನ್ನಡ ಅರ್ಥಕೋಶ

ನೋಡಿ
ಕುಮಾರವ್ಯಾಸ ಭಾರತ
ಗದುಗಿನ ಭಾರತ ಪದಕೋಶ
ಪರಿವಿಡಿ

ಉಲ್ಲೇಖ
ವರ್ಗ:ಕನ್ನಡ ಸಾಹಿತ್ಯ